ಶ್ರೀಕ್ಷೇತ್ರ ಶ್ರೀಚಕ್ರಕಲ್ಲಾರೆಮನೆಯಲ್ಲಿ 12000 ಚದರ್ ಘನ ಪೂಟಿನ ಮಹಾ ಯಾಗಶಾಲೆ ನಿರ್ಮಾಣಮಾಡಬೆಕೆಂದು ಸಂಕಲ್ಪಿಸಲಾಗಿದೆ.
ಇದು ಸಹಸ್ರ ಚಂಡಿಕಾ, ಅತಿ ರುದ್ರದಂತಹ ಮಹಾಯಾಗಗಳನ್ನು ಮಾಡಲು ಮತ್ತು ಭಗವತಿಯ ಸನ್ನಿಧಾನದ್ದಲ್ಲಿ ನಡೆಯುವ ಇನ್ನೂ ಅನೇಕ ಮಹಾಯಾಗಗಳಿಗೆ ಉಪಯುಕ್ತವಾಗಲಿದೆ.
ಈ ಕಟ್ಟಡವು ಕೇವಲ ಯಾಗಶಾಲೆ ಅಷ್ಟೇ ಆಗಿರದೇ ಅದು ಸಮಯಯಕ್ಕೆ ಸರಿಯಾಗಿ ಇನ್ನು ಇತರೆ ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳಿಗೂ ಉಪಯುಕ್ತವಾಗಲಿದೆ. ಸಾಮುಹಿಕ ವಿವಾಹ, ವಿಶೇಷ ಸಭೆ ಸಮಾರಂಭಗಳಿಗೂ ಇದು ಸಾಕ್ಷಿಯಾಗಲಿದೆ. ಮತ್ತು ಅವಾವ ಕಾರ್ಯಕ್ರಮಕ್ಕೆ ಸರಿಯಾಗಿ ಪರಿಪರ್ತಿಸುವಂತಹ ರಿತಿಯಲ್ಲಿ ಇದನ್ನು ನಿರ್ಮಾಣಮಾಡಲಾಗುತ್ತಿದೆ.
ಈ ಕಟ್ಟಡದಲ್ಲಿ ಭೋಜನಾಲಯ, ವಸತಿ, ಪಾಕಶಾಲೆ, ಶೌಚಾಲಯಗಳೂ ಬರಲಿದೆ.
ಇದಾಗಲೆ ಕೆಲಸ ಪ್ರಾರಂಭವಾಗಿದ್ದು ಸುಮಾರು 1.5 ಕೋಟಿ ಮೊತ್ತವನ್ನು ಅಂದಾಜಿಸಲಾಗಿದೆ. ಭಕ್ತರು ಸಹಕರಿಸಿ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೆಕೆಂದು ಶ್ರೀವಿದ್ಯಾ ಪ್ರತಿಷ್ಠಾನವು ವಿನಂತಿಸಿಕೊಳ್ಳುತ್ತದೆ