ಶ್ರೀವಿದ್ಯಾ ಪ್ರತಿಷ್ಠಾನಮ್

ಶ್ರೀಚಕ್ರ ಅಥವಾ ಶ್ರೀವಿದ್ಯಾ ಉಪಾಸನೆ ಎನ್ನುವಂತದ್ದು ಆಧ್ಯಾತ್ಮದ ಉನ್ನತ ಸಾಧನೆಯಾಗಿದೆ. ನೇರವಾಗಿ ಮುಕ್ತಿ ಮಾರ್ಗಕ್ಕೆ ಒಯ್ಯುವ ಈ ಮಹತ್ತರವಾದಂತಹ ಸಾಧನೆಯು ಪ್ರಸ್ತುತ ಕಾಲದಲ್ಲಿ ಅತಿ ವಿರಳವಾಗಿದ್ದು, ಶ್ರೀ ಸತೀಶ್ ಶರ್ಮಾ ಇವರು ಶ್ರೀಚಕ್ರೋಪಾಸನ್ನು ಸಾಧಿಸಿದ್ದಾರೆ‌. ಇವರು ಹಿಮಾಲಯದ ಗಿರಿಶಿಖರಗಳ ನಡುವೆ ತಿಂಗಳುಗಳ ಕಾಲ ಇದ್ದು ಭಗವತಿಯ ದಿವ್ಯ ದರ್ಶನವನ್ನು ಪಡೆದಂತವರಾಗಿರುತ್ತಾರೆ‌. ಈ ಸಾಧನೆಯನ್ನು ಲೋಕ ಕಲ್ಯಾಣಾರ್ಥವಾಗಿ ಬಳಸಸಬೇಕೆಂದು ಶ್ರೀ ರಾಜರಾಜೇಶ್ವರಿ ಅಮ್ಮನವರ ಅಪ್ಪಣೆಯಾದ ಕಾರಣ "ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯೆಂಬ ಗ್ರಾಮದಲ್ಲಿ" ಶ್ರೀರಾಜರಾಜೇಶ್ವರಿ ಅಮ್ಮನವರ ದೇವಸ್ಥಾನವನ್ನು ಪ್ರತಿಷ್ಠಾಪಿಸಿರುತ್ತಾರೆ.

ಇದು ಬಹಳ ಶಕ್ತಿಯುತವಾದ ಶ್ರೀಚಕ್ರ ಸಹಿತ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರವಾಗಿದ್ದು, ಇಲ್ಲಿ ಪ್ರತಿ ನಿತ್ಯವು ಶ್ರೀಚಕ್ರದ ಆರಾಧನೆ ಗುರುಗಳಿಂದಲೇ ನಡೆಯುತ್ತದೆ. ಹಾಗೂ ಪ್ರತಿ ಶುಕ್ರವಾರ ವಿಶೇಷವಾದ ಸೇವೆಗಳ ಜೊತೆ ಪ್ರತಿದಿನ ಅನ್ನದಾನವನ್ನು ಇಲ್ಲಿ ಮಾಡಲಾಗುತ್ತದೆ. ಹೋಮ ಹವನ ಹಾಗೂ ಶ್ರೀರಾಜರಾಜೇಶ್ವರಿ ಅಮ್ಮನವರಿಗೆ ಅತ್ಯಂತ ಪ್ರಿಯವಾದಂತಹ ದೀಪಸೇವೆ ಇಲ್ಲಿ ಪ್ರಮುಖವಾಗಿ ನಡೆಯುವಂತದ್ದಾಗಿದೆ.

ಇಲ್ಲಿಗೆ ಭಕ್ತಾದಿಗಳು ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಬರುತ್ತಾರೆ‌. ಇಲ್ಲಿ ವಿಶೇಷವಾಗಿ ಅಮ್ಮನವರು ಜ್ಯೋತಿ ಸ್ವರೂಪದಲ್ಲಿ ಭಕ್ತರನ್ನು ಸಲಹುತ್ತಾರೆ‌. ಈ ಕ್ಷೇತ್ರಕ್ಕೆ ಬಂದು ಅಮ್ಮನವರಿಗೆ ದೀಪಾರಾಧನೆಯ ಸೇವೆಯ ಸಂಕಲ್ಪವನ್ನು ಮಾಡಿ ಹೋದರೆ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎನ್ನುವುದು ಇಲ್ಲಿಗೆ ಬಂದಂತಹ ಭಕ್ತರ ಅನುಭವದ ನುಡಿಯಾಗಿದೆ.

ಬಹಳಷ್ಟು ಜನರು ತಮ್ಮ ಲೌಕಿಕ ಬದುಕಿನ ಜಂಜಾಟಗಳನ್ನು ಹೋಗಲಾಡಿಸಲು ಗುರುಗಳ ಸಲಹೆಗಾಗಿ ಬರುತ್ತಾರೆ‌.

ಹಾಗೆ ಬಂದಂತ ಸದ್ಭಕ್ತರಿಗೆ ಚೈತನ್ಯ ರೂಪಿಯಾದಂತಹ ಭಗವತಿಯ ಅವತಾರವು ಆದಂತಹ ಶ್ರೀ ಸತೀಶ್ ಗುರೂಜಿಯವರು ಅವರ ಸಮಸ್ಯೆಗಳನ್ನು ಆಲಿಸಿ ತಮ್ಮ ಜ್ಯೋತಿಷ್ಯ ವಿದ್ಯೆಯಿಂದ ಪರಿಹಾರವನ್ನು ನೀಡುತ್ತಾರೆ‌.

ಶ್ರೀವಿದ್ಯಾ ಪ್ರತಿಷ್ಠಾನದಲ್ಲಿ ಭಕ್ತರು ತಮ್ಮ ಕಾಮನೆಗಳನ್ನು ನೆರೆವೇರಿಸಿಕೊಳ್ಳಲು ಮಾಡಿಸುವುವ ಪಾರಾಯಣ ಸೆವೆ

ಶ್ರೀವಿದ್ಯಾ ಪ್ರತಿಷ್ಠಾನದಲ್ಲಿ ಭಕ್ತರು ತಮ್ಮ ಕಾಮನೆಗಳನ್ನು ನೆರೆವೇರಿಸಿಕೊಳ್ಳಲು ಮಾಡಿಸುವ ಚಂಡಿಕಾ ಹೋಮ