Devotional Library
ವೀರಭದ್ರ ಎನ್ನುವ
ವೀರಭದ್ರ ಭಜನೆ
ವೀರಭದ್ರ ವೀರಭದ್ರ ವೀರಭದ್ರ ಎನ್ನುವ |
ದುರಿತವೆಲ್ಲ ಹರಿದು ದೂರ ಪಾವನಾತ್ಸರೆನಿಸುವ ||ಪ ||
ದಕ್ಷಯಜ್ಞದಲ್ಲಿ ಶಿವಗೆ ಮಾನವಿಲ್ಲದಾಯಿತು |
ದಕ್ಷಕುವರಿ ಮುಗ್ಗ ಗಿರಿಜೆಯಾತ್ಮದಲ್ಲಿ ದಹಿಸಿತು |
ರೂಕ್ಷಚಿತ್ತ ಶಿವಶಿಖಾದ್ ವೀರಶಕ್ತಿ ಜನಿಸಿತು |
ಪಕ್ಷಪಾತರಹಿತ ವಿಹಿತ ದುಷ್ಟಶಿಕ್ಷೆಯಾಯಿತು ||
ನಿನ್ನ ಕೋಪ ಸರ್ವಲೋಕ ಧ್ವಂಸಕರಿಯು |
ನಿನ್ನ ಪ್ರೀತಿ ಕರುಣೆಯಿಂದ ಸೌಖ್ಯಶಾಂತಿಯು |
ಬನ್ನ ಬಡುತಲಿಹರು ಜನರು ನಿನ್ನ ಸ್ಮರಿಸದೇ |
ತನಿಮಿತ ಭಜನೆ ಪೂಜೆ ಸ್ತುತಿಯೊಳಿಂದು ತೊಡಗಿದೆ ||
ದೇಶದೆಲ್ಲ ರೋಗ ರುಜಿನ ಭಯನಿವಾರಣ |
ಆಶ್ರಯವನು ಕರುಣಿಸು ನಿನ್ನ ಪಾವನ ಚರಣ ||
ಕೇಶವಾದಿ ದೇವ ವೃಂದ ಪ್ರೀತ ನಂದನ |
ವಿಶದ ನೇತ್ರ ರುದ್ರ ಗಾತ್ರ ಪತಿತ ಪಾವನ ||
ಕಾಲರುದ್ರ ಭಕ್ತ ಭದ್ರ ಪಾಪನಾಶನ |
ಶೂಲ ಶೂಲ ಮೋಸ ಜಾಲ ಠಕ್ಕ ಭಂಜನ |
ಅಳಲನೆಲ್ಲ ನೋಡಿಕೊಳಲು ಹರಕೆ ಸಾಧನ |
ತೊಳಲುತಿರುವ ಜನಸಮೂಹ ಪ್ರಾಪ್ತ ಸುಖಧನ ||
ವೀರಭದ್ರ ಪರಮದೇವ ತೇನಮೋ ನಮೋ |
ಸರ್ವಕಾರ್ಯ ಕ್ಷೇತ್ರಪಾಲ ತೇನಮೋ ನಮೋ |
ಧರಣಿತಲದಿ ಅಗ್ರಮಾನ್ಯ ತೇನಮೋ ನಮೋ |
ಚರಣಕೆರಗಿದೆಮ್ಮ ಭಜನ ತೇನಮೋ ನಮೋ ||
Tamil and Telugu text are not present in the supplied Firebase backup yet. Their fields are ready in WordPress for later entry.