Skip to content
lalitatripurasundari temple |
| |
|
Devotional Library

ವೆಂಕಟದೇವಾ

ವೆಂಕಟ ದೇವಾ ವೆಂಕಟದೇವಾಲಂಕೃತ ಶುಭಕರ | ಪಂಕಜ ನಾಭನೆ ಯದುವರನೇ ॥ದೇವ॥ ಪಂಕಜನಾಭನೆ ಯದುವರಿನೇ ॥ಪಲ್ಲವಿ॥ ಕೋಮಲ ರೂಪನೆ ಶ್ಯಾಮಲ ವರ್ಣನೆ | ಕಾಮಿತವರಗಳ ಕೊಡುವವನೇ ॥ದೇವ॥ ಕಾಮಿತ ವರಗಳ ಕೊಡುವವನೇ || ಗೋವಳ ಕಾಯುತ ಯಮುನಾತೀರದಿ | ತರುಣಿಯರನು ಮೋಹಿಸಿದವನೇ ॥ಕೃಷ್ಣ॥ ತರುಣಿಯರನು ಮೋಹಿಸಿದವನೇ || ಎಡಗೈಯಲಿ ಶಂಖ ಬಲಗೈಯಲಿ ಚಕ್ರ | ನಾನಾರೂಪವ ಧರಿಸಿದವನೇ ॥ಕೃಷ್ಣ॥ ನಾನಾರೂಪವ ಧರಿಸಿದನೆ || ಆಲದೆಲೆಯ ಮೇಲೊರಗುವ ದೇವನೆ | ಲಕ್ಷ್ಮೀಪತಿ ಶ್ರೀವಿಠ್ಠಲನೇ ॥ರಂಗ॥ ಲಕ್ಷ್ಮೀಪತಿ ಶ್ರೀವಿಠ್ಠಲನೇ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate