Devotional Library
ತಾಯೇ ನೀ ಕಾಯೆ ಲಲಿತಾಂಬಿಕೆ
ತಾಯೇ ನೀ ಕಾಯೆ
ತಾಯೇ ನೀ ಕಾಯೆ ಲಲಿತಾಂಬಿಕೆ
ಗಾನಲೋಲ ಪ್ರಿಯೆ ಆದಿ ಮಾಯೆಯೆ||ಪ||
ಇಹದ ಮೋಹವ ದೂರಗೊಳಿಸುತ
ಕಾಪಿಡೆಮ್ಮನು ಸತತವು ದೇವಿ
ನವರಾತ್ರಿಯೊಳು ಭಜಿಸುವ ಮುಗುಧರ
ಭಕ್ತಿ ಕುಸುಮಗಳ ಸ್ವೀಕರಿಸಮ್ಮಾ || ೧||
ಬಿಂದು ಮಂಡಲದೊಳು ರಾರಾಜಿಪಳೇ
ಓಂಕಾರ ನಾದಪ್ರಿಯೆ ಪದುಮಪಾದಳೇ
ಕುಂಕುಮಾರ್ಚನೆ ನಿನಗೆ ನಿತ್ಯವೂ ಗೈಯ್ಯುವೆ
ಚಿಂತಿತಾರ್ಥವ ನೀಡೆ ಶ್ರೀಚಕ್ರೇಶ್ವರಿಯೆ ||೨||
Tamil and Telugu text are not present in the supplied Firebase backup yet. Their fields are ready in WordPress for later entry.