Skip to content
lalitatripurasundari temple |
| |
|
Devotional Library

ರಾಮ ರಾಮ ನಮೋಸ್ತುತೇ

ರಾಮ ರಾಮ ನಮೋಸ್ತುತೇ ರಾಮ ರಾಮ‌ನಮೋಸ್ತುತೇ ಜಯ ರಾಘವಾಯ ನಮೋಸ್ತುತೇ| ರಾಮಚಂದ್ರ ನಮೋಸ್ತುತೇ ಜಯ ರಾಘವೇಶ್ವರ ಪಾಹಿಮಾಂ ||ಪ|| ಇಂದ್ರನನುಜ ಫಣೀನಂದ್ರನಮರಜ ವೃಂದಮುನಿಜನ ಸೇವಿತ| ಚಂದ್ರಶೇಖರ ಪ್ರಿಯಮುಪೇಂದ್ರ ನರೇಂದ್ರ ರಾಘವ ಪಾಹಿಮಾಂ || ದಶರಥಾತ್ಮಜ ರಘುಕುಲೋದ್ಭವ ದಶಶಿರೋರುಹ ಕಾರುಣೈ | ಶಶಿಮುಖಾಂಬುಜನಯನೆ ಸೀತೆಯ ವಶವ ಮಾಡಿದ ರಾಘವ| ವಸುಮತಿಯ ಭಾರಂಗಳೆಲ್ಲವ ಹಸುಳೆ ಭರತಗೆ ಪಾಲಿಸಿ| ಎಸೆದು ವನವಾಸಕ್ಕೆ ತೆರೆಳಿದ ಕುಸುಮ ಲೋಚನ ಪಾಹಿಮಾಂ|| ಅಂದು ಹನುಮನ ಮುಖದಿ ವಾಲಿಯ ಕೊಂದು ಹಂಪೆಯೊಳಿರುತಿರೆ | ಬಂದರಾ ಕಪಿ ಕೋಟಿ ನಾಯಕ ವೃಂದ ಸಹಿತಲೆ ಭಾನುಜಂ ನಿಂದು ಕರಗಳ ಮುಗಿದು ಬೆಸಸೇನೆಂದು ಕೇಳಲು ರಘುಜಗೆ| ಸಂದ ವೃತ್ತಾಂತವನು ಪೇಳಿದನಂದು ರಾಘವ ಪಾಹಿಮಾಂ || ಮುದ್ರೆಯುಂಗುರವಿತ್ತು ಹನುಮಗೆ ಬುದ್ಧಿಗಲಿಸಿದ ರಾಘವ | ಅಬ್ದಿಯಗಲವ ದಾಂಟಿ ಮುಂದಣ ಉದ್ಯವನದೊಳಗಿರುತಿರೆ | ಮುದ್ದು ಜಾಹ್ನಕಿ ಪದಕೆ ವಂದಿಸಿ ಮುದ್ರೆಯುಂಗುರವಿತ್ತಿಹ | ಸುದ್ದಿಯೆಲ್ಲವ ಕೇಳಿ ಹರುಷದೊಳಿದ್ದ ರಾಘವ ಪಾಹಿಮಾಂ || ಸುತ್ತಮುತಿನ ಗಿರಿಗಳೆಲ್ಲವ ಕಿತ್ತು ಸೇತುವೆಗಟ್ಟಿಸಿ | ಭಕ್ತವಿಭೀಷಣಗೊಲಿದು ಪಟ್ಟವಯಿತ್ತು ಮುಂದಣ ಲಂಕೆಯ | ಸುತ್ತುಮುತ್ತಿಗೆಯಿಕ್ಕಿ ದನುಜರ ಮೊತ್ತವನು ಸಂಹರಿಸಿಯ | ಸತ್ತ ತಮ್ಮನ ಜೀವ ಬರಿಸಿದ ಪ್ರಸಿದ್ಧಿದಾಯಕ ಪಾಹಿಮಾಂ || ಕುಂಭಕರ್ಣಾದಿಗಳನೆಲ್ಲರ ಅಂಬಿನಾತುದಿಯಿಂದಲಿ | ಹಂಬಲೆಲ್ಲವ ಬಿಡಿಸಿ ಯಮಪುರವೆಂಬ ಪಟ್ಟಣ ಕಳುಹುತ | ಕುಂಭಿನೀಬಿಲದಧಿಕ ದೇವಿಯ ನಂಬಿಯಾಗವ ಮಾಡಲು | ಸಂಭ್ರಮಂಗಳನರಿತ ಕಮಲದಳಾಯತಾಂಬಕ ಪಾಹಿಮಾಂ || ಯಜ್ಞಕುಂಡವ ಬಗೆದು ರಾವಣನುಗೃತಪವನು ಮಾಡಲು | ಯಜ್ಞ ಸಮಯದೊಳಂಗದಾದಿಗಳೆದ್ದು ವಿಘ್ನವ ಗೈಯಲು | ಯಜ್ಞ ಕೆಡಲಿಕೆ ವಾಲಿಯಣುಗನು ಭದ್ರಗದೆಯಿಂದ್ಲೊಡೆಯಲು | ಯಜ್ಞಮೂರ್ತಿ ಕಡೆಗೆ ಕೂಡಿದ ಸುಗ್ರೀವಾಧಿಪ ಪಾಹಿಮಾಂ || ಹತ್ತು ತಲೆಯಿಪ್ಪತ್ತು ತೋಳಿನ ಸತ್ವದಳತೆಯನರಿಯದೇ | ಮತ್ತೆ ರಾಮನ ಮೇಲೆ ಸೆಣಸಿದ ಮೃತ್ಯುರಾವಣ ಬಿಂಕದಿ | ಮಸ್ತಕಂಗಳ ಹೊಡೆದು ಕೆಡಹುತ ಮುಕ್ತಿಪದವನ್ನೀವುತ | ವಿಸ್ತರದಿ ತಾ ಪುರವ ನೋಡಿದ ಮುಕ್ತಿದಾಯಕ ಪಾಹಿಮಾಂ || ಇಂತು ರಾಮಾಯಣದ ಕಥೆಗಳನಂತ ಕವಿಜನ ಪೊಗಳಲು | ಮಂತ್ರಮೂರ್ತಿ ರಾಮನವರನು ಅಂತರಂಗದ ಭಾವದಿ | ತಂತ್ರದೆಣಿಕೆಯನರಿತು ಭಕ್ತರ ಚಿಂತಿತಾರ್ಥವನೀವುತ | ಕಾಂತೆಸಹಿತೈತಂದಯೋಧ್ಯದಿ ನಿಂತ ರಾಘವ ಪಾಹಿಮಾಂ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate