Skip to content
lalitatripurasundari temple |
| |
|
Devotional Library

ನಿನ್ನ ನೋಡಲೆಂದು ಬಂದೆ ಲಲಿತಾಂಬೆ

ನಿನ್ನ ನೋಡಲೆಂದು ಬಂದೆ ನಿನ್ನ ನೋಡಲೆಂದು ಬಂದೆ ಲಲಿತಾಂಬೆ ಎನ್ನ ತಾಪ ಕಳೆದು ಹರಸೆ ನೀ ಜಗದಂಬೆ || ಪ || ಹೊನ್ನಗದ್ದೆಯಲ್ಲೇ ನೀ ನಿಂತೆಯಂತೆ ಶ್ರೀಚಕ್ರವೇ ನಿನ್ನ ವಾಸವಂತೆ ಪಾಶದಂಡ ಇಕ್ಷು ಪೂವ ಪಿಡಿದೆಯಂತೆ ಎನ್ನ ತಾಪ ಕಳೆದು ಹರಸೆ ನೀ ಜಗದಂಬೆ || ೧ || ಜನುಮ ಜನುಮದಿಂದ ನೊಂದು ಬಂದೆ ನಂಬೆ ನಿನ್ನ ಪಾದ ಕಮಲ ಕಂಡು ಹರುಷನಾದೆನಂಬೆ ಹೂವ ಪಿಡಿದ ಕೈಯ್ಯಲೆನ್ನ ರಕ್ಷಿಸಂಬೆ ಎನ್ನ ತಾಪ ಕಳೆದು ಹರಸೆ ನೀ ಜಗದಂಬೆ || ೨ || ಭಜನೆ ಗಾನ ನಿನಗೆ ಪ್ರಿಯ ಮೋದವಂತೆ ನಿನ್ನ ಗಣಗಳೆಲ್ಲ ಕೂಡಿ ನೀ ನಲಿವೆಯಂತೆ ಜ್ಯೋತಿ ರೂಪದಿ ನೀ ಪೊರೆವೆಯಂತೆ ನಿನ್ನ ಸೇವೆ ಗೈವ ನಾವೇ ಪುಣ್ಯವಂತರೆಂಬೆ || ೩ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate