Skip to content
lalitatripurasundari temple |
| |
|
Devotional Library

ನೀ ಒಲಿದು ಬಾರೆ ಲಲಿತೆ

ನೀ ಒಲಿದು ಬಾರೆ ಲಲಿತೆ ನೀ ಒಲಿದು ಬಾರೆ ಲಲಿತೆ | ಲಲಿತೆ ನೀ ಒಲಿದು ಬಾರೆ ಲಲಿತೆ ಜಯಜಯ ಲಲಿತೆ ಹರಹರ ಲಲಿತೆ ಜಯಜಯ ಲಲಿತೆ ಹರಹರ ಲಲಿತೆ || ಪ || ಪಾಪ ಕೂಪದಲಿ ನೊಂದು ಬೆಂದೆನು ಪಾಪವ ಕಳೆಯೆ ಲಲಿತೆ ಮಾಯಾ ಜಗದಾ ಆಸೆಗೆ ಸಿಲುಕಿ ಮರೆತೆನೆ ನಿನ್ನಾ ಲಲಿತೆ| ಲಲಿತೆ || ೧ || ಕಣ್ಣೆದುರಿರುವಾ ನಿನ್ನನು ಕಾಣದೆ ಹುಡುಕಿದೆ ಎಲ್ಲೋ ಲಲಿತೆ ಭವಸಾಗರವಾ ದಾಟಿಸೋ ಅಂಬಿಗಳೆ ಮೋಕ್ಷವ ತೋರೆ ಲಲಿತೆ | ಲಲಿತೆ || ೨ || ನಿನ್ನಾ ಚರಣವ ಸ್ತುತಿಸುತಲಿರುವೆನು ಬಿಡದೆ ನೀ ಕಾಯೆ ಲಲಿತೆ ಶ್ರೀಚಕ್ರದಲಿ ನೆಲೆಸಿಹ ದೇವಿಯೆ ದರುಶನ ನೀಡೆ ಲಲಿತೆ | ಲಲಿತೆ || ೩ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate