Devotional Library
ಜಾಣೆವಾಣಿ ಅಜನರಾಣಿ
ಜಾಣೆ ವಾಣಿ
ಜಾಣೆ ವಾಣಿ ಅಜನರಾಣಿ
ವೀಣಾಧರೆ ಶಾರದೆ
ಹಾಡಿಹಾಡಿ ಸ್ತುತಿಯ ಮಾಡಿ
ಧನ್ಯನಾದೆ ವರದೆ|| ಪ||
ನಿನ್ನಪಾರ ಒಲುಮೆ ಇರಲಿ
ಹರಸು ಎನ್ನನನುದಿನ
ಭಿನ್ನ ಭಿನ್ನ ಭಾವ ಕಳೆದು
ಹಾಡಿಸಮ್ಮ ದಿನ ದಿನ || ೧ ||
ಜ್ಞಾನ ನೀಡಿ ಮೌಢ್ಯ ಕಳೆವೆ
ಅಕ್ಷರಗಳ ಒಡತಿಯೆ
ಗಾನ ಪ್ರೇಮ ಬಿತ್ತಿ ಬೆಳೆವೆ
ಬ್ರಹ್ಮನ ಪ್ರಿಯ ಮಡದಿಯೆ || ೨ ||
ಮಾತೆ ಮಡಿಲು ಕರುಣೆ ಕಡಲು
ನೆಮ್ಮದಿಯನು ನೀಡಲು
ಪಾರಿಜಾತದಂತ ಬಾಳು
ನಿನ್ನಡಿಗೆ ಮೀಸಲು || ೩ ||
Tamil and Telugu text are not present in the supplied Firebase backup yet. Their fields are ready in WordPress for later entry.