Skip to content
lalitatripurasundari temple |
| |
|
Devotional Library

ಹೇ ಪರಮೇಶ್ವರಿ ನಯನ ಮನೋಹರಿ

ಹೇ ಪರಮೇಶ್ವರಿ ನಯನ ಮನೋಹರಿ ಹೇ ಪರಮೇಶ್ವರಿ ನಯನ ಮನೋಹರಿ ಅಂಬಾ ಶಾಂಭವಿ ತ್ರಿಪುರೇಶ್ವರಿ ನಂಬಿದ ಭಕ್ತರ ಪೊರೆಯುವ ದೇವಿಯೆ ಸ್ಮರಿಸುವೆ ನಿನ್ನನು ಕೌಮಾರಿಯೆ || ಪ || ಕರುಣಾ ಸಾಗರಿ ಕಮಲ ಲೋಚನಿ ಕಾತ್ಯಾಯನಿ ಶ್ರೀ ಜಗದಂಬಿಕೆ ಶರಣಾಗತರನು ಪಾಲಿಪ ಮಾತೆಯೆ ಚರಣವ ನಂಬಿದೆ ಪರಿಪಾಲಿಸೆ || ೧ || ಅರುಣೋದಯ ಸಮ ತೇಜೊರೂಪಿಣಿ ಆನಂದ ರೂಪಿಣಿ ಲಲಿತಾಂಬಿಕೆ ಭವಭಯಹಾರಿಣಿ ಭುವನೇಶ್ವರಿಯೆ ಅನುದಿನ ಪಾಲಿಸಿ ಪೊರೆಯಮ್ಮಾ || ೨ || ಶ್ರೀಚಕ್ರ ನಿಲಯೇ ಶ್ರೀವಿದ್ಯಾ ರೂಪಿಣಿ ಶ್ರೀಮದ್ ರಾಜರಾಜೇಶ್ವರಿಯೇ ಅಂತರಂಗದಿ ನೀ ನೆಲೆಸಿರುವೆ ಅಖಿಲಾಂಡೇಶ್ವರಿ ಕಾಮಾಕ್ಷಿಯೇ || ೩ || ವೇದದ ಸಾರವು ನಿನ್ನಾ ಮಹಿಮೆಯು ನಾದದ ರೂಪವು ನಿನ್ನಾ ಕರುಣೆ ಜಯಜಯ ಲಲಿತೆ ಹರಹರ ಲಲಿತೆ ಭಕ್ತಿಯ ಗಾನವ ಸ್ವೀಕರಿಸೇ || ೪ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate