Devotional Library
ಹೇ ಜನನಿ ಜಗದಂಬೆ
ಹೇ ಜನನಿ ಜಗದಂಬೆ
ಹೇ ಜನನಿ ಜಗದಂಬೆ ನಿನ್ನಡಿಗೆ ಶರಣೆಂಬೆ || ಪ ||
ಮೂರ್ಜಗವನಾಡಿಸುವ ಸೂತ್ರಧಾರಿಣಿ ನಿನ್ನ
ಪೂಜಿಸುತ ವಂದಿಸುತ ಬಾಗುವೆವು ನಾವ್ ಮುನ್ನ
ಬಾಗುವೆವು ನಾವ್ ಮುನ್ನ || ೧ ||
ಗಿರಿಜಾತೆ ನಿನ್ನಡಿಯ ನಂಬಿರುವ ಭಕ್ತರಿಗೆ
ಕೊಡೆಯಿಂದ ಮರೆ ಮಾಡು ಮರೆಯಲಾರೆವು ತಾಯೆ
ಮರೆಯಲಾರೆವು ತಾಯೆ || ೨ ||
ಕರುಣಿಸುತ ನೀನೊಲಿಯೆ ಕಲ್ಲು ಕರುಗುವುದಮ್ಮ
ಸುರ ವಿನುತೆ ನೀ ಮುನಿಯೆ
ಬ್ರಹ್ಮಾಂಡವಿರದಮ್ಮ ಬ್ರಹ್ಮಾಂಡವಿರದಮ್ಮ || ೩ ||
Tamil and Telugu text are not present in the supplied Firebase backup yet. Their fields are ready in WordPress for later entry.