Devotional Library
ಹರಿನಾರಾಯಣ ನಮೋ ನಮೋ
ಹರಿನಾರಾಯಣ ನಮೋ ನಮೋ
ಹರಿನಾರಾಯಣ ನಮೋ ನಮೋ
ದುರಿತ ನಿವಾರಣ ನಮೋ ನಮೋ
ಭವಭಯ ಹರಣ ರುಕ್ಮಿಣಿ ರಮಣ
ಪಾವನ ಚರಣ ನಮೋ ನಮೋ || ಪ ||
ಗಿರಿಧರ ಮುರಹರ ಕರುಣಾಸಾಗರ
ಶ್ರೀ ಗೋವಿಂದ ಜಗದಾನಂದ
ಪಂಕಜನೇತ್ರ ಪರಮಪವಿತ್ರ
ಶಂಖ ಚಕ್ರಧರ ನಮೋ ನಮೋ || ೧ ||
ತ್ರಿಭುವನ ಸುಂದರ ನಂದ ಕುಮಾರ
ಕಾಶಿ ಪಿತಾಂಬರ ಕೌಸ್ತುಭಹಾರ
ಕಸ್ತೂರಿ ತಿಲಕ ಮೋರ ಮುಕುಟ ಧರ
ಮುರಲಿ ಮನೋಹರ ನಮೋ ನಮೋ || ೨ ||
ಸುರನರ ಸೇವಿಪ ಅಸುರ ಸಂಹಾರಿ
ಭಕ್ತೋದ್ಧಾರಿ ಕೃಷ್ಣಮುರಾರಿ
ಅಗಣಿತ ಮಹಿಮಾ ಗುಣಗಣಧಾಮ
ಶ್ರೀ ರಘು ರಾಮಾ ನಮೋ ನಮೋ || ೩ ||
Tamil and Telugu text are not present in the supplied Firebase backup yet. Their fields are ready in WordPress for later entry.