Skip to content
lalitatripurasundari temple |
| |
|
Devotional Library

ಗಿರಿಜೆ ಕುವರನೆ ಲೋಕವಂದ್ಯನೆ

ಶ್ರೀ ಗಣೇಶ ಭಜನೆ ಗಿರಿಜ ಕುಮಾರನೆ ತೋಷವರ್ಧನೆ ಶ್ರೀಗಣೇಶನೆ ಪಾಲಿಸೋ । ಹೇ ಗಣೇಶನೆ ಪಾಲಿಸೋ ಹೇ ಗಣೇಶನೆ ರಕ್ಷಿಸೋ ॥ಪ॥ ಉರಗ ಭೂಷಣ ವಕ್ರದಂತನೆ ಹೇ ಸುರೇಶನೆ ರಕ್ಷಿಸೋ । ಹೇ ಸುರೇಶನೆ ಪಾಲಿಸೋ ಹೇ ಸುರೇಶನೆ ರಕ್ಷಿಸೋ ॥೧॥ ಗಿರಿಜ ನಿನ್ನನ್ನು ತನ್ನ ಕರದಲಿ ಪಿಡಿದು ಹರಷದಿ ನಿಂದಳೋ । ಕರಿಯ ಮುಖವನು ಪಡೆದ ನಿನ್ನನು ಕರಿಯವದನೆಂದು ಕರೆಯಳೋ ॥೨॥ ಪಿತನ ಜೊತೆಯಲಿ ಘೋರ ಕದನವ ಜನಿಸಿದಾದಿನ ಮಾಡಿದೆ । ಅತುಲ ವಿಕ್ರಮ ಮೆರೆದು ಜಗದಲಿ ಗಜವದನೆಂದೆನಿಸಿದೆ ॥೩॥ ಘೋರ ತಪವನು ಮಾಡಿ ದಶಮುಖನಾತ್ಮಲಿಂಗವ ಪಡೆಯಲು । ವೀರ ವಟುವೇಷದೊಳು ರಂಜಿಸಿ ಮರಳಿ ನೀನದ ಪಡೆದಿಹೆ ॥೪॥ ಸಕಲಕಾರ್ಯದಿ ಪ್ರಥಮ ಪೂಜೆಯ ನಿನಗೆ ಗೈವರು ಸರ್ವರು । ಸಫಲಗೊಳಿಸೈ ನಮ್ಮ ಕಾರ್ಯವನೆಂದು ಪ್ರಾರ್ಥನೆ ಗೈವರು ॥೫॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate