Skip to content
lalitatripurasundari temple |
| |
|
Devotional Library

ಭಾಗ್ಯದಾ ಲಕ್ಷ್ಮೀ ಬಾರಮ್ಮಾ

ಭಾಗ್ಯದಾ ಲಕ್ಷ್ಮೀ ಬಾರಮ್ಮಾ ರಾಗಂ: ಶ್ರೀ (ಮೇಳಕರ್ತ 22 ಖರಹರಪ್ರಿಯ ಜನ್ಯರಾಗ) ಆರೋಹಣ: ಸ ರಿ2 ಮ1 ಪ ನಿ2 ಸ ಅವರೋಹಣ: ಸ ನಿ2 ಪ ದ2 ನಿ2 ಪ ಮ1 ರಿ2 ಗ2 ರಿ2 ಸ ತಾಳಂ: ಆದಿ ರೂಪಕರ್ತ: ಪುರಂಧರ ದಾಸ ಭಾಷಾ: ಕನ್ನಡ ಪಲ್ಲವಿ ಭಾಗ್ಯದಾ ಲಕ್ಷ್ಮೀ ಬಾರಮ್ಮಾ ನಮ್ಮಮ್ಮ ನೀ ಸೌ-ಭಾಗ್ಯದಾ ಲಕ್ಷ್ಮೀ ಬಾರಮ್ಮಾ ॥ ಚರಣಂ 1 ಹೆಜ್ಜೆಯೆ ಮೇಲೇ ಹೆಜ್ಜೆಯ ನಿಕ್ಕುತ ಗೆಜ್ಜೆ ಕಾಲ್ಗಳಾ ಧ್ವನಿಯ ತೋರುತ (ಮಾಡುತ) ಸಜ್ಜನ ಸಾಧೂ ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥ (ಭಾಗ್ಯದಾ) ಚರಣಂ 2 ಕನಕಾವೃಷ್ಟಿಯ ಕರೆಯುತ ಬಾರೇ ಮನಕಾಮನೆಯಾ ಸಿದ್ಧಿಯ ತೋರೆ । ದಿನಕರಕೋಟೀ ತೇಜದಿ ಹೊಳೆಯುವ ಜನಕರಾಯನಾ ಕುಮಾರಿ ಬೇಗ ॥ (ಭಾಗ್ಯದಾ) ಚರಣಂ 3 ಅತ್ತಿತ್ತಗಳದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಲ । ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ॥ (ಭಾಗ್ಯದಾ) ಚರಣಂ 4 ಸಂಖ್ಯೇ ಇಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯಾ ತಿರುವುತ ಬಾರೆ । ಕುಂಕುಮಾಂಕಿತೆ ಪಂಕಜ ಲೋಚನೆ ವೇಂಕಟ ರಮಣನ ಬಿಂಕದರಾಣೀ ॥ (ಭಾಗ್ಯದಾ) ಚರಣಂ 5 ಸಕ್ಕೆರೆ ತುಪ್ಪದ ಕಾಲುವೆಹರಿಸಿ ಶುಕ್ರವಾರದಾ ಪೂಜೆಯ ವೇಳೆಗೆ । ಅಕ್ಕೆರೆಯುಳ್ಳ ಅಳಗಿರಿ ರಂಗನನ ಚೊಕ್ಕ ಪುರಂದರ ವಿಠ್ಠಲನ ರಾಣೀ ॥ (ಭಾಗ್ಯದಾ)

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate