Devotional Library
ಬಂದಾಳೆ ಲಲಿತೆ ಇಂದಿಲ್ಲಿಗೆ
ಬಂದಾಳೆ ಲಲಿತೆ ಇಂದಿಲ್ಲಿಗೆ
ಬಂದಾಳೆ ಲಲಿತೆ ಇಂದಿಲ್ಲಿಗೆ
ಕಂದನ ಮೊರೆ ಕೇಳಿ ಜನನಿಯು ಬಂದಂತೆ || ಪ ||
ಸುತನ ಮನದಲಿ ಬಂದು ಗುಡಿಯ ನೀ ಕಟ್ಟೆಂದು
ಶ್ರೀಚಕ್ರದಲಿ ನಿಂಬಾ ಅಭಯ ಕೊಡುತಲಿ || ೧ ||
ಹುಲಿಯನೇರಿ ಬಂದು ತವಕದಿ ತಾನಿಂದು
ಮನದಿ ಸ್ಮರಿಪರಾ ಪ್ರೇಮದಿ ಪೊರೆಯುತಲಿ || ೨ ||
ಚಂದ್ರ ಕೀರಿಟಿಣಿ ಪಾಶಾಂಕುಶಧಾರಿ
ಶರಣಾದ ಭಕುತರ ಇಷ್ಟಾರ್ಥ ಸಲಿಸುತ || ೩ ||
Tamil and Telugu text are not present in the supplied Firebase backup yet. Their fields are ready in WordPress for later entry.