Skip to content
lalitatripurasundari temple |
| |
|
Devotional Library

ದೇವಿ ದುರ್ಗಿಯೆ ಲೋಕಮಾತೆಯೆ

ದೇವಿ ದುರ್ಗಿಯೆ ಲೋಕ ಮಾತೆಯೆ ದೇವದುರ್ಗಿಯೆ ಲೋಕಮಾತೆಯೆ ನಿನಗೆ ವಂದನೆ ವಂದನೆ ॥ ಭವದಿ ಬೆಂದಿಹ ನಿನ್ನ ಮಕ್ಕಳು ಸಲಹು ಜನನಿಯೆ ಬೇಗನೆ ॥ ಮಂತ್ರವರಿಯೆವು ತಂತ್ರವರಿಯೆವು ನಿನ್ನ ಸ್ತುತಿಯನು ಮಾಡಲು | ಮಂದಮತಿಗಳು ನಾವು ತಾಯೆ ಇಳಿದು ಬಾ ನೀ ನೋಡಲು ॥೧॥ ಯಂತ್ರದಡಿಯಲಿ ಸಿಕ್ಕು ನರಳುವ ನಮ್ಮ ರಕ್ಷಣೆ ಗೈಯಲು | ಅಂತರಾತ್ಮನ ಮೊರೆಯನಾಲಿಸಿ ಸೌಖ್ಯಧಾಮಕೆ ಒಯ್ಯಲು ॥೨॥ ದಾನ ಮಾಡಲು ಧನವ ಕಾಣೆವು ಜ್ಞಾನವಂತೂ ದೂರವೆ | ಮಾನವಂತರ ಮಾಡಿ ಪಾಲಿಸು ಮರಕೆ ಕಾಯ್ಗಳು ಭಾರವೆ ॥ ಮನಸು ಚಂಚಲ ತನುವು ದುರ್ಬಲ ಶಾಂತಿಯೆಂಬುದ ಕಾಣದೆ | ಗಾನವರಿಯದ ಭಜನೆಯಾದರೂ ಮಾಡುತಿರುವೆವು ತೊರೆಯದೆ ॥೩॥ ಚಂಡಮುಂಡರ ಕೊಂದು ಸುರರನು ರಕ್ಷಿಸುತ ನೀ ಚಂಡಿಯೆ | ಭಂಡ ಮಹಿಷನ ಮೆಟ್ಟಿ ಜಗದಲಿ ಮಹಿಷ ಮರ್ದಿನಿಯೆನಿಸಿಯೆ ॥ ಕೆಂಡವಾಗಿ ನಿಶುಂಭ ಶುಂಭರ ಹರಣ ಕೊಂಡಿಹೆ ಕ್ಷಣದಲಿ | ಬಂಡನಡಗಿಸಿ ರಕ್ತಬೀಜನ ಶೌರ್ಯಮೆರೆದಿಹೆ ರಣದಲಿ ॥೪॥ ಜನನಿ ಮೂಕಾಂಬಿಕೆಯೆ ನಿನ್ನನು ನಿರತ ನೆನೆಯುವ ವರವನೂ | ಜನಕೆ ಪ್ರೇಮದಿ ಜನ್ಮವಿಲ್ಲದ ಸೃಷ್ಟಿಯಾಚೆಯ ಚಲುವನೂ ॥ ಜೇನು ಹಾಲಿನ ಮಧುರ ಸಂಗಮದಂಥ ಬಾಳಿನ ಸವಿಯನೂ | ಜನ್ಮದಾತೆಯೇ ಮಮತೆಯಿಂದುಡೆ ಉಣಿಸು ಶಾಂತಿಯ ಸುಧೆಯನೂ ॥೪॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate